ನೆಮಟೆಲ್‍ಮಿನ್‍ತೆಸ್ -
	ಆಸ್ಕೆಲ್ಮಿಂತೀಸ್ ವಿಭಾಗಕ್ಕೆ ಸೇರಿದ ಉಪವಿಭಾಗ. ಇದಕ್ಕೆ ಸೇರಿದ ಹುಳುಗಳ ದೇಹ ದುಂಡಾಗಿಯೂ ನೀಳವಾಗಿಯೂ ಇದೆ. ಶಿಲಕೆಗಳಿಲ್ಲ. ದೇಹಭಿತ್ತಿಯಲ್ಲಿ ಉದ್ದುದ್ದನೆಯ ಸ್ನಾಯುಗಳು ಮಾತ್ರ ಉಂಟು. ಸ್ನಾಯುಕೋಶದ ಹೊರಭಾಗದಲ್ಲಿ ಸಂಕುಚನ ತಂತುಗಳೂ ಅಗಲವಾಗಿರುವ ಒಳಭಾಗದಲ್ಲಿ ಕೋಶಕೇಂದ್ರ ಉಂಟು. ಜ್ವಾಲಾಕೋಶಗಳಿಲ್ಲ. ಈ ಉಪವಿಭಾಗದಲ್ಲಿ ನೆಮಟೋಡ ಮತ್ತು ನೆಮಟೋಮಾರ್ಫ ಎಂಬ ಎರಡು ವರ್ಗಗಳಿವೆ. ಈ ಗುಂಪಿನ ಹಲವಾರು ಪ್ರಾಣಿಗಳು ಪರೋಪಜೀವನ ನಡೆಸುವುವು.
(ನೋಡಿ- ನೆಮಟೋಡ)
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ